Wednesday, November 12, 2014

ಅಭಿಮನ್ಯ - ಕನ್ನಡ ಚಲನಚಿತ್ರ ವಿಮರ್ಶೆ.

ಅಭಿಮನ್ಯ - ಕನ್ನಡ ಚಲನಚಿತ್ರ ವಿಮರ್ಶೆ. 
ಇತ್ತೀಚಿನ ದಿನಗಳಲ್ಲಿ ಕಂಡ ಕೆಲವೇ ಕೆಲವು ಕನ್ನಡ ಚಿತ್ರಗಳಲ್ಲಿ ಅಭಿಮನ್ಯ ಅತ್ಯಂತ ವಿಭಿನ್ನವಾದ ಚಿತ್ರ. ಸಮಾಜಿಕ ಕಳಕಳಿ ಹಾಗು ಮನಸ್ಸಿಗೆ ನಾಟುವ ಸಂದೇಶವನ್ನು ಒಳಗೊಂಡಿದೆ.
ಅರ್ಜುನ್ ಹಾಗು ಅವರ ತಂಡವನ್ನು ನಾವು ಪ್ರಶಂಸಿಸಲೇ ಬೇಕು. ಸಮಾಜವನು ಕಾಡುತ್ತಿರುವ ಸಮಕಾಲಿನ ಪ್ರಾರಬ್ದ ಗಳಲಿ, ಶಿಕ್ಷಣವನು ವ್ಯಾಪಾರವನ್ನಾಗಿ ಮಾಡಿರು ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳನ್ನು ಮನಸಿನಲ್ಲಿ ಇಟ್ಟುಕೊಂಡು ಹೆಣೆದಿರುವ ಅದ್ಬುತ ಚಿತ್ರ. ಈ ಚಿತ್ರದ ಸಂದೇಶ ಕಂಡಿತ ಜನಸಾಮನ್ಯರಿಗೆ ತಲುಪುತ್ತದೆ ಹಾಗು ನೊಡುಗರನ್ನು ವಾಸ್ತವಿಕದ ಕಡೆಗೆ ಕರೆದುಕೊಂಡು ಹೊಗುತ್ತದೆ. 
ಚಿತ್ರ ಹಾಗು ಚಿತ್ರಕಥೆಯನ್ನು ನಿರ್ದೆಶನದೋಂದಿಗೆ ಚಿನ್ನಾಗಿ ಅರ್ಜುನ್ ಸರ್ಜಾ ನಿಭಾಯಿಸಿಧಾರೆ. ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗಿತದ ಜೊತೆಗೆ ಸಂಕಲನ ಕಂಡಿತ ನಮ್ಮ ಗಮನವನ್ನು ಸೆಳೆಯುತ್ತದೆ. 
ಸಮಯಸಿಕ್ಕಾಗ, ನೀವು ಕಂಡಿತ ಅಭಿಮನ್ಯ ಚಿತ್ರವನ್ನು ವಿಕ್ಷಿಸಿ.
9th Nov'14